Thursday, July 10, 2014

ಧರೆಯ ಕೂಗು!...


ಇಳೆಯು ದಾಹದಿ ಬೆಂದಿಹುದು
ಮಣ್ಣಿನ ಕಂಪಿದು ಮಾಸಿಹುದು
ಬರಗಾಲ ನಕ್ಕು ಕರತಾಡನ ಗೈಯುತಿರೆ
ಅಂತರ್ಜಲ ಬತ್ತಿ ಸಾವು ಕಂಡಿಹುದು||

           ಗದ್ಗತಿತ ಕಂಠದಲಿ ಧರೆಯು ಕೂಗುತಿರೆ
           ತೃಷೆಯಿಂದ ಬಳಲಿಹೆನು ನೀರು ಕೊಡು ಎನುತಿರೆ
           ಮೋಡಗಳ ತಾತ್ಸಾರ ಕಂಡು ಬೆರಗಾಗುತಿರೆ
          ತೋರಿಸಬಾರದೇ ಮಳೆ ಬರುವ ಚಹರೆ ||

ದಿನದಿನವು ಏರಿಹುದು ಸೂರ್ಯನ ಭುಗಿಲು
ಕನಿಕರವ ತೋರದೇ ಆ ಬಾನ ಮುಗಿಲು
ಬಾಡಿಹುದು ಅರಳುವ ಹೂವಿನ ಎಸಳು
ಇನ್ನೆಷ್ಟು ಕಾಲವು ಈ ಭೂಮಿ ನಗಲು ||


           -ಪೂರ್ಣಿಮಾ ಶೆಟ್ಟಿ,,
           ಡಯಟ್ ಕಾಸರಗೋಡು,, ಮಾಯಿಪ್ಪಾಡಿ.

              

No comments:

Post a Comment