Sunday, July 20, 2014

ಗಾಳಿಯ ಅಬ್ಬರ; ಶಾಲೆಗೆ ಹಾನಿ

ಶುಕ್ರವಾರ ತಡರಾತ್ರಿ ಬೀಸಿದ ಗಾಳಿಮಳೆಗೆ ಮರವೊಂದು ಬಿದ್ದು  ಮಾಯಿಪ್ಪಾಡಿ ಡಯಟ್ ಲ್ಯಾಬ್
ಶಾಲೆಯ ತರಗತಿ ಕೋಣೆಯೊಂದು ಭಾಗಶ ಹಾನಿಯುಂಟಾಗಿದೆ. ಸುಮಾರು 50,000 ರೂಪಾಯಿ
ನಷ್ಟ ಅಂದಾಜಿಸಲಾಗಿದೆ..

ಅಮ್ಮ



ಕಂದನು ಅಳುತಲಿ  ಕರೆಯುವುದು
ಅಮ್ಮ ಎಂಬ ಶಬ್ದವನು
ಗುಡಿಯೇ ಇಲ್ಲದ ಗೋಪುರವಿಲ್ಲದ 
ಶಕ್ತಿದೇವತೆ ಎಂಬವಳು।।

ಜೀವಕೆ ಜೀವವ ನೀಡಿ ರಕ್ಷಿಸುವ 
ಮುತ್ತನು ನೀಡಿ ಸಲಹುವ
ಅಮ್ಮನು ಇವಳು ನನ್ನವಳು।।

ಅಳುವನು ನಿಲ್ಲಿಸಿ
ಎದೆಗಪ್ಪಿ  ಹಿಡಿಯುವ
ತಾಯಿಯು ಇವಳು ನನ್ನವಳು।।

----ಪೂರ್ಣಿಮ ಶೆಟ್ಟಿ  ಸಿ. ಜೆ.  

ಇದು ಡಯಟ್ ಮಾಯಿಪ್ಪಾಡಿಯಲ್ಲಿ ಕಲಿಯುತ್ತಿರುವ ಅಧ್ಯಾಪಕ ವಿದ್ಯಾರ್ಥಿಗಳ ಬ್ಲೋಗ್ ಆಗಿದೆ ,,
ನಮ್ಮಲ್ಲಿರುವ ಪ್ರತಿಭೆಯನ್ನು ಈ ಬ್ಲೋಗ್ ನಲ್ಲಿ ಪ್ರಕಟಿಸುವ ಪ್ರಯತ್ನ ನಮ್ಮದು....
ತಪ್ಪಿದ್ದರೆ ಕ್ಷಮಿಸಿ,,,ಉತ್ತಮ ಮಾರ್ಗದರ್ಶನ ನೀಡಿ ಆಶೀರ್ವಾದಿಸಿ,,,

ಇತೀ...
    SDK friends
    Maipady

Thursday, July 10, 2014

ಹೂಮಳೆ!



ಕೋಗಿಲೆಯ ದನಿಗೆ ಸ್ವರ ಸೇರಿಸಲೇ
ಅರಳುವ ಸುಮದಿ ಮಧುವಾಗಲೇ
ಸೂರ್ಯನ ಕಿರಣವ ಸೆರೆಹಿಡಿಯಲೇ
ಹಾರುವ ಹಕ್ಕಿಯ ಗರಿಯಾಗಲೇ
ಲತೆಯೆಡೆಯಲಿ ನಗುವ ಮಲ್ಲಿಗೆ ನಾನಾಗಲೇ
ಏನಾಗಲಿ ನಾನು ಅಲೆದಿಹೆನು ತಿಳಿಯದಲೆ
ಯಾರು ಸುರಿವರು ಇದಕೆ ಪ್ರೀತಿಯ ಹೂಮಳೆ?

-ಪೂರ್ಣಿಮಾ ಶೆಟ್ಟಿ,,ಡಯಟ್ ಕಾಸರಗೋಡು,, ಮಾಯಿಪ್ಪಾಡಿ.

ಸಂಚು!


            

                 
ಅವಳ ಕಣ್ಣಂಚು
ಬಳುಕುವ ಕೋಲ್ಮಿಂಚು
ಆ ಮುಂಗುರುಳ ಕೆಂಚು
ಕತ್ತಿಯ ಕೊನೆಯಂಚು
ಆದರೇನು ?ನಾನು ತಿಳಿಯದಾದೆ
ಅವಳ ಆ ಸಂಚು!!

-ಪೂರ್ಣಿಮಾ ಶೆಟ್ಟಿ,, 
ಡಯಟ್ ಕಾಸರಗೋಡು,, ಮಾಯಿಪ್ಪಾಡಿ.

ಧರೆಯ ಕೂಗು!...


ಇಳೆಯು ದಾಹದಿ ಬೆಂದಿಹುದು
ಮಣ್ಣಿನ ಕಂಪಿದು ಮಾಸಿಹುದು
ಬರಗಾಲ ನಕ್ಕು ಕರತಾಡನ ಗೈಯುತಿರೆ
ಅಂತರ್ಜಲ ಬತ್ತಿ ಸಾವು ಕಂಡಿಹುದು||

           ಗದ್ಗತಿತ ಕಂಠದಲಿ ಧರೆಯು ಕೂಗುತಿರೆ
           ತೃಷೆಯಿಂದ ಬಳಲಿಹೆನು ನೀರು ಕೊಡು ಎನುತಿರೆ
           ಮೋಡಗಳ ತಾತ್ಸಾರ ಕಂಡು ಬೆರಗಾಗುತಿರೆ
          ತೋರಿಸಬಾರದೇ ಮಳೆ ಬರುವ ಚಹರೆ ||

ದಿನದಿನವು ಏರಿಹುದು ಸೂರ್ಯನ ಭುಗಿಲು
ಕನಿಕರವ ತೋರದೇ ಆ ಬಾನ ಮುಗಿಲು
ಬಾಡಿಹುದು ಅರಳುವ ಹೂವಿನ ಎಸಳು
ಇನ್ನೆಷ್ಟು ಕಾಲವು ಈ ಭೂಮಿ ನಗಲು ||


           -ಪೂರ್ಣಿಮಾ ಶೆಟ್ಟಿ,,
           ಡಯಟ್ ಕಾಸರಗೋಡು,, ಮಾಯಿಪ್ಪಾಡಿ.